ಕಾವ್ಯ ಸಂಜೆ
ಕಾವ್ಯ ಸಂಜೆ
ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಕಾವ್ಯ ಎಂದರೆ ಶಿಷ್ಟ ಮತ್ತು ಮೌಖಿಕ ಪರಂಪರೆಯ ಕಥನಗಳ ಪದ್ಯರೂಪದ ನಿರೂಪಣೆಯಾಗಿದೆ.
ಸಂಜೆ ಎಂಬುದು ಇಲ್ಲಿ ಸಮಯವಾಚಿ ಪದವಾದರೂ ಅದೊಂದು ರೂಪಕ . ಕಾವ್ಯ ಸಂಜೆ ಎಂದರೆ ಅದೊಂದು ಸಮಕಾಲೀನ ಸಮಾಜೋ- ರಾಜಕೀಯ ತಲ್ಲಣಗಳನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸುವ ಮುಸ್ಸಂಜೆಯ ಪದ್ಯಕಾಲ.
ಕಾವ್ಯ ಸಂಜೆಯು ಶಾಂತಿ, ಪ್ರೀತಿ, ಬಂಧುತ್ವ, ಸ್ನೇಹ ಮತ್ತು ಪ್ರಕೃತಿಗಳ ಸಂಬಂಧಗಳ ಬಗ್ಗೆ ಮಾತನಾಡುತ್ತದೆ ಹಾಗೂ ನಮ್ಮ ಸಮಾಜದಲ್ಲಿ ಪ್ರತಿದಿನವೂ ಎದುರಾಗುವ, ಹಿಂಸೆಯಿಂದ ಉಂಟಾಗುವ ಗಾಯಗಳಿಗೆ ಕಾವ್ಯದ ಮೂಲಕ ಚಿಕಿತ್ಸೆ ಹುಡುಕುತ್ತದೆ. ಕಾವ್ಯ ಸಂಜೆಯನ್ನು ನಾನು( ಮಮತಾ ಸಾಗರ್, ಕನ್ನಡದ ಕವಿ) 2013ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಿದೆ ಮತ್ತು ಜನವರಿ 2019ರಲ್ಲಿ ಇದನ್ನೊಂದು ಟ್ರಸ್ಟ್ ಆಗಿ ನೋಂದಾಯಿಸಲಾಗಿದೆ. ಕನ್ನಡದ ಯುವ ಕವಿಗಳ ಅಭಿವ್ಯಕ್ತಿಯನ್ನು ಕನ್ನಡದ ಅಂಗಳದಿಂದಾಚೆಗೂ ವಿಸ್ತರಿಸುವ ಮತ್ತು ತಲುಪಿಸುವ ಉದ್ದೇಶದಿಂದ ಕಾವ್ಯಸಂಜೆಯನ್ನು ಆರಂಭಿಸಲಾಯಿತು.
ಕಾವ್ಯದ ಮೂಲಕ ಎಲ್ಲ ಬಗೆಯ ಜನರನ್ನು ತಲುಪುವ ಬಹುಭಾಷಾ ವೇದಿಕೆಯಾಗಿ ಕಾವ್ಯಸಂಜೆಯನ್ನು ವಿನ್ಯಾಸಗೊಳಿಸಿದ್ದೇವೆ. ಇಂದು ಕಾವ್ಯಸಂಜೆಯು ಕನ್ನಡಿಗರಿಗೂ, ಕನ್ನಡೇತರರಿಗೂ, ಕನ್ನಡವೇ ತಿಳಿಯದವರಿಗೂ ಅಭಿವ್ಯಕ್ತಿಯ ತಂಗುದಾಣವಾಗಿದೆ.
ಕಾವ್ಯ ಸಂಜೆಯಲ್ಲಿ ಕಾವ್ಯವು ಸಮುದಾಯಗಳನ್ನು ಸಂಪರ್ಕಿಸಲು, ಸಾಮಾಜಿಕ-ರಾಜಕೀಯ ತಲ್ಲಣಗಳನ್ನು ಅಭಿವ್ಯಕ್ತಿಸಲು ಮತ್ತು ಸಾಮಾಜಿಕ ಪರಿವರ್ತನೆಯನ್ನು ಪ್ರೊತ್ಸಾಹಿಸಲು ಶಕ್ತಿಯುತ ಆಯುಧವಾಗಿದೆ. ಇಲ್ಲಿ ವಿಶಿಷ್ಟ ಶೈಲಿಯ ಕವಿತೆಗಳು ಕಟ್ಟಲ್ಪಡುತ್ತವೆ, ರಚಿಸಲ್ಪಡುತ್ತವೆ, ಅನುವಾದಿಸಲ್ಪಡುತ್ತವೆ, ಪ್ರಸ್ತುತಪಡಿಸಲ್ಪಡುತ್ತವೆ ಮತ್ತು ಪ್ರದರ್ಶಿಸಲ್ಪಡುತ್ತವೆ. ಇಲ್ಲಿ ಕವಿಗಳು ತಮ್ಮ ದನಿಯನ್ನು ಕಂಡುಕೊಳ್ಳುತ್ತಾರೆ, ಮತ್ತು ಕವಿತೆಗಳು ಜನರನ್ನು ಎದುರುಗೊಳ್ಳುತ್ತವೆ.
ತಂಡದ ಪರಿಚಯ

Kaavya Sanje @ The Project 560 Festival
ಕಾವ್ಯ ಸಂಜೆಯಲ್ಲಿ ಕಾವ್ಯವು ಸಮುದಾಯಗಳನ್ನು ಸಂಪರ್ಕಿಸಲು, ಸಾಮಾಜಿಕ-ರಾಜಕೀಯ ತಲ್ಲಣಗಳನ್ನು ಅಭಿವ್ಯಕ್ತಿಸಲು ಮತ್ತು ಸಾಮಾಜಿಕ ಪರಿವರ್ತನೆಯನ್ನು ಪ್ರೊತ್ಸಾಹಿಸಲು ಶಕ್ತಿಯುತ ಆಯುಧವಾಗಿದೆ. ಇಲ್ಲಿ ವಿಶಿಷ್ಟ ಶೈಲಿಯ ಕವಿತೆಗಳು ಕಟ್ಟಲ್ಪಡುತ್ತವೆ, ರಚಿಸಲ್ಪಡುತ್ತವೆ, ಅನುವಾದಿಸಲ್ಪಡುತ್ತವೆ, ಪ್ರಸ್ತುತಪಡಿಸಲ್ಪಡುತ್ತವೆ ಮತ್ತು ಪ್ರದರ್ಶಿಸಲ್ಪಡುತ್ತವೆ. ಇಲ್ಲಿ ಕವಿಗಳು ತಮ್ಮ ದನಿಯನ್ನು ಕಂಡುಕೊಳ್ಳುತ್ತಾರೆ, ಮತ್ತು ಕವಿತೆಗಳು ಜನರನ್ನು ಎದುರುಗೊಳ್ಳುತ್ತವೆ.
ತಂಡದ ಪರಿಚಯ

ಕವಿ ಮತ್ತು ಸಂಸ್ಥಾಪಕರು
ಮಮತಾ ಸಾಗರ

ಕವಿ
ರೇಷ್ಮಾ ರಮೇಶ್

ಕವಿ
ಚಾಂದ್ ಪಾಷಾ ಎನ್ ಎಸ್

ಕವಿ
ದಾದಾಪೀರ್ ಜೈಮನ್

ಕವಿ
ಸಿದ್ದಾರ್ಥ ಎಂ ಎಸ್

ಕವಿ
ಹಾಜಿರಾ ಖಾನಂ

ಕವಿ
ಶಶಾಂಕ್ ಜೋಹ್ರಿ